ಬಿಲ್ಲವ ಅಸೋಸಿಯೇಶನ್ ಬೆಂಗಳೂರು ಇದರ ವತಿಯಿಂದ ಮಂಗಳೂರಿನಲ್ಲಿ ವಧು-ವರಾನ್ವೇಷಣೆ

09.05.10 ಮಂಗಳೂರು : ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಳದ ಆಡಳಿತ ಮಂಡಳಿ ಸಹಯೋಗದೊಂದಿಗೆ ಬಿಲ್ಲವ ಅಸೋಸಿಯೇಶನ್ ಬೆಂಗಳೂರು ಇವರಿಂದ ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಸಭಾಭವನದಲ್ಲಿ ಮೇ 9ರ ಭಾನುವಾರ ಬೆಳಿಗ್ಗೆ ಸುಮಾರು 488 ಜೋಡಿಗಳ ವಧು- ವರಾನ್ವೇಷಣಾ ಸಮಾವೇಶ ನಡೆಯಿತು.

ಸಮಾವೇಶದ ಉದ್ಘಾಟನೆಯನ್ನು ದೀಪಾ ಕಂಪರ್ಟ್ಸ್ ಇದರ ಪಾಲುದಾರರಾದಂತಹ ಉರ್ಮಿಳಾ ರಮೇಶ್ ದೀಪ ಬೆಳಗುವುದರ ಮೂಲಕ ಆರಂಭಿಸಿದರು.

ಬಳಿಕ ಮಾತನಾಡಿದ ಅವರು ವಧು-ವರಾನ್ವೇಷಣೆಯಲ್ಲಿ ಪಾಲ್ಗೊಳ್ಳುವ ಎಲ್ಲಾ ಜೋಡಿಗಳಿಗೆ ಹಾಗೂ ಹೆತ್ತವರಿಗೆ ಶುಭ ಹಾರೈಸಿದರು.
ಸಮಾವೇಶದ ಅಧ್ಯಕ್ಷತೆಯನ್ನು ಕುದ್ರೋಳಿ ದೇವಳದ ಆಡಳಿತ ಮಂಡಳಿ ಅಧ್ಯಕ್ಷರಾದ ಸಾಯಿಕುಮಾರ್ ವಹಿಸಿದ್ದರು.

ಮುಖ್ಯ ಅಥಿತಿಗಳಾದ ಬಿಲ್ಲವ ಅಸೋಸಿಯೇಶನ್ ಬೆಂಗಳೂರು ಇದರ ಅದ್ಯಕ್ಷರಾದ ಎಂ.ವೇದಕುಮಾರ್ ಮಾತನಾಡಿ ಬಿಲ್ಲವ ಸಮಾಜದಲ್ಲಿರುವ ಕಡು ಬಡವರಿಂದ ಹಿಡಿದು ಉನ್ನತ ವಿದ್ಯಾಭ್ಯಾಸ ವಿರುವ ಜೋಡಿಗಳು ಮಂಗಳೂರಿನ ಈ ಸಮಾವೇಷದಲ್ಲಿ ಪಾಲ್ಗೊಂಡಿರುವು ಸಂತೋಷ ತಂದಿದೆ ಎಂದು ಅವರು ಹೇಳಿದರು.

ಸಮಾವೇಷದ ವೇದಿಕೆಯಲ್ಲಿ ಡಾ| ಅನುಸೂಯ ಸಾಲಿಯಾನ್ ಸಂಚಾಲಕರು ವಧು-ವರಾನ್ವೇಷಣಾ ಸಮಿತಿ, ದೆವೇಂದ್ರ ಪೂಜಾರಿ, ಶ್ರೀಮತಿ ಬಾನುಮತಿ ಹರೀಶ್, ಪದ್ಮರಾಜ್, ಮಹೇಶ್ಚಂದ್ರ, ಎನ್. ಗೋಪಾಲಕೃಷ್ಣ, ಪ್ರಧಾನ ಕಾರ್ಯದರ್ಶಿ ಬೆಂಗಳೂರು ಬಿಲ್ಲವ ಸಂಘ, ತಾರನಾಥ, ಬಿ.ಟಿ ಸಾಲಿಯಾನ್, ಭಾರತಿ ದಾಮೋದರ ಸುವರ್ಣ, ಮೊದಲಾದವರು ಉಪಸ್ಥಿತರಿದ್ದರು.

ಭಾರತಿ ಕುಂದರ್ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು. ಶ್ರೀಲತಾ ಗೋಪಾಲಕೃಷ್ಣ, ಶ್ರಿಮತಿ ಗಾಯತ್ರಿ ಇವರು ಪ್ರಾರ್ಥನೆ ನೆರವೇರಿಸಿದರು.

ಸಮಾವೇಶದಲ್ಲಿ ಒಟ್ಟು 488 ಜೋಡಿಗಳು ನೊಂದಾವಣೆ ಗೊಂಡಿದ್ದು, ಇದರಲ್ಲಿ 400ಕ್ಕೂ ಮಿಕ್ಕಿ ವಧುಗಳು ಹಾಗೂ 100ಕ್ಕೂ ಮಿಕ್ಕಿ ವರರು ನೋಂದಾಯಿಸಿದ್ದಾರೆ. ಜೋಡಿಗಳಿಗೆ ಪರಸ್ಪರ ಮಾತುಕತೆ ಹಾಗೂ ವಧು ವರರ ಕಡತ ಪರಿಶೀಲಿಸುವ ಅವಕಾಶಗಳನ್ನು ಕಲ್ಪಿಸಲಾಗಿದೆ.

 

 

 

 

 

 

 

 

 

 

 

 

 

 


 


ಇನ್ನಷ್ಟು ಸುದ್ದಿಗಳು  

ಹಿಂದಿನ ಸುದ್ದಿ



Coastal Times video news


Anupama Monthly Magazine



Mega TV

 Videos Clip


Vinayaka Furniture

10-20%  Special Discount


 Search Engine Marketing & Optimization


ಸುದ್ದಿ ಮುಖ್ಯಾಂಶಗಳು


ಗ್ರಾಮ ಪ೦ಚಾಯತ್  ಪ್ರಥಮ ಹ೦ತದ ಮತದಾನ


ಪಿಯುಸಿ ಫಲಿತಾಂಶ ಉಡುಪಿ ಜಿಲ್ಲೆ  ಪ್ರಥಮ ದಕ್ಷಿಣ ಕನ್ನಡ ದ್ವಿತೀಯ ಸ್ಥಾನ


ಪುರಭನದಲ್ಲಿ ಕೊಂಕಣಿ ರಂಗೋತ್ಸವ ಸಮಾರೋಪ


ಗ್ರಾ.ಪಂ. ಚುನಾವಣೆ: ನಿಷೇಧಾಜ್ಞೆ


ಕಟೀಲಿನಲ್ಲಿ ಏಳು ಜೋಡಿಗಳ ಸಾಮೂಹಿಕ ವಿವಾಹ


ಮನಾಪ ವ್ಯಾಪ್ತಿಯಲ್ಲಿ ಸಾಲ ನೀಡಲು ಆರ್ ಟಿಸಿ ಕಡ್ಡಾಯವಲ್ಲ: ಜಿಲ್ಲಾಧಿಕಾರಿ


ಎಸ್ಎಸ್ಎಲ್‌ಸಿ, ಪಿಯುಸಿ ಫಲಿತಾಂಶ ಮೇ 6 ಮತ್ತು 7ರಂದು


ಏಳು ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದ ಲೋಕಾಯುಕ್ತರು


ಫಲ್ಗುಣಿ (ಗುರುಪುರ) ನದಿಯ

ವಿಹಂಗಮ ನೋಟ


ಕಾರ್ಮಿಕರ ದಿನಾಚರಣೆ ಇವರಿಗಿಲ್ಲವೇ?


ಎಸ್.ಟಿ.ಯು ನಲ್ಲಿ ತಲೆಹೊರೆ ಕಾರ್ಮಿಕರ

 ಮೇ ದಿನಾಚರಣೆ


ಧರ್ಮಸ್ಥಳದಲ್ಲಿ 238 ಜೋಡಿಗಳಿಗೆ

 ಸಾಮೂಹಿಕ ವಿವಾಹ


ಪೊಲೀಸ್ ಪೇದೆಯಿಂದ ಮೇಲಾಧಿಕಾರಿ ಸಹಿ ದುರಪಯೋಗ


ಗ್ರಾ.ಪಂ. ಚುನಾವಣೆ: ಅಕ್ರಮ ಚಟುವಟಿಕೆ ನಿಯಂತ್ರಿಸಲು ಕಂಟ್ರೋಲ್ ರೂಂ


ಧರ್ಮಸ್ಥಳದಲ್ಲಿ ಸಂಗೀತ ರತ್ನ ಯೇಸುದಾಸ್ ಗಾನಸುಧಾ ಹಾಗೂ ಸನ್ಮಾನ


ನಗರದಲ್ಲಿ ಸಿಇಟಿ ಪರೀಕ್ಷೆ ಪ್ರಾರಂಭ

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Type Your Comments



© Copyright www.megamedianews.com  All Rights Reserved