|
ಜಿಲ್ಲಾ ಕನ್ನಡ ಸಾಹಿತ್ಯ
ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ.

08.03.10 : ಮಂಗಳೂರು ಪುರಭವನದಲ್ಲಿ ಮಾರ್ಚ್ 15 ರಿಂದ
17 ರವರೆಗೆ ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು
ಧರ್ಮಸ್ಥಳದಲ್ಲಿ ನಡೆದ ಸರಳ ಸಮಾರಂಭದಲ್ಲಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು
ಬಿಡುಗಡೆಗೊಳಿಸಿದರು.
ಯುವಜನತೆ ಮತ್ತು ವಿದ್ಯಾರ್ಥಿಗಳು ಸಾಹಿತ್ಯ
ಸಮ್ಮೇಳನದಲ್ಲಿ ಹೆಚ್ಚು ಸಕ್ರೀಯರಾಗಿ ಭಾಗವಹಿಸಿ ಕನ್ನಡದ ಜಾಗೃತಿಯಾಗಬೇಕು. ಆಂಗ್ಲ ಭಾಷಾ
ವ್ಯಾಮೋಹದಿಂದ ಕನ್ನಡದ ಬೆಳವಣಿಗೆ ಕುಂಟಿತವಾಗ ಬಾರದು ಎಂದು ವಿರೇಂದ್ರ ಹೆಗ್ಗಡೆಯವರು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ
ಪ್ರದೀಪ್ ಕುಮಾರ್ ಕಲ್ಕೂರ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ
ಪುನರೂರು, ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷ ಡಾ| ಬಿ. ಯಶೋ ವರ್ಮ
ಉಪಸ್ಥಿತರಿದ್ದರು. |