|
ಕೊಂಕಣಿ ಗಾನಕೋಗಿಲೆ ವಿಲ್ಫಿ
ರೆಬಿಂಬಸ್ ಇನ್ನಿಲ್ಲ

ವಿಲ್ಫಿ ರೆಬಿಂಬಸ್
09.03.10
ಮಂಗಳೂರು : ಕೊಂಕಣಿ ನವ್ಯ
ಗೀತೆಗಳ ಮೂಲಕ
ವಿಶ್ವದಲ್ಲೇ ಜನಪ್ರಿಯರಾಗಿದ್ದ ವಿಲ್ಫಿ ರೆಬಿಂಬಸ್ ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ
ಆಸ್ಪತ್ರೆಯಲ್ಲಿ ಇಂದು
ಬೆಳಿಗ್ಗೆ ನಿಧನರಾದರು.
ನಾಲ್ಕು ದಶಕಗಳಿಂದ ಗಾಯನ ಕ್ಷೇತ್ರದಲ್ಲಿ ಹೆಸರು
ಮಾಡಿದ್ದ ವಿಲ್ಫಿ ರೆಬಿಂಬಸ್, ಹಾಡುವ ಶೈಲಿ, ಸಂಗೀತ ಸಂಯೋಜನೆ ಸಂಗೀತ ಪ್ರಿಯರನ್ನು
ಮಂತ್ರಮಗ್ದರನ್ನಾಗಿಸಿತ್ತು. 245 ವಿಲ್ಫಿ ನೈಟ್ , 40 ಕ್ಕೂ ಹೆಚ್ಹು ಮ್ಯೂಸಿಕ್ ಆಲ್ಬಮ್ ಗಳು,
6 ಭಕ್ತಿ ಗೀತೆಗಳು, 1 ವಾದ್ಯ ಸಂಗೀತ ಆಲ್ಬಮ್ ಅಲ್ಲದೆ ಸಾವಿರಕ್ಕೂ ಹೆಚ್ಹು ಹಾಡುಗಳನ್ನು
ರಚಿಸಿದ್ದಾರೆ .ಲ್ಯಾಂಡೆಲಿನ್ ರೆಬಿಂಬಸ್ ಮತ್ತು ಮಗ್ದಲೀನ ಮಂಡೋನ್ಸಾರ ಮಗನಾಗಿ 1942 ಜನಿಸಿದ
ವಿಲ್ಪಿ ತನ್ನ 14 ನೇ ವಯಸ್ಸಿಗೆ ಗಾಯನ ಕ್ಷೇತ್ರಕ್ಕೆ ಕಾಲಿಟ್ಟಿದ್ದರು. ಅವರ ತನ್ನ 15 ನೇ
ವಯಸ್ಸಿನಲ್ಲಿ ರಚಿಸಿದ ಪ್ರಥಮ ಕೃತಿ `ಪೊಸಾನಾಸೋ ಸಂಸಾರ್' ಸೈಂಟ್ ಜೋಸೆಫ್ ನಾಟಕ ಸಂಘದ ಮೂಲಕ
ಬೆಳಕಿಗೆ ಬಂದಿತ್ತು.
ವಿಲ್ಫಿ ರೆಬಿಂಬಸ್ ಮೀನಾ ರಬಿಂಬಸ್ ರನ್ನು 1970 ಜನವರಿ
25 ರಂದು ಮದುವೆಯಾಗಿದ್ದರು. ವೀಣಾ ಮತ್ತು ವಿಕಾಸ್ ಎಂಬ ಇಬ್ಬರು ಮಕ್ಕಳನ್ನು ಪಡೆದಿದ್ದಾರೆ.
ವಿಲ್ಫಿ ರೆಬಿಂಬಸ್ ಅಂತಿಮ
ಯಾತ್ರೆಯು ಮಾರ್ಚ್ 11 ರಂದು ಸಂಜೆ 4
ಗಂಟೆಗೆ ಜೆಪ್ಪು ಸೈಂಟ್ ಜೋಸೆಪ್ ಚರ್ಚ್ ನಲ್ಲಿ ನಡೆಯಲಿದೆ.

 |