ಮಹಿಳಾ ಜಾಗೃತಿ ಕಾನೂನು ಅರಿವು ಕಾರ್ಯಕ್ರಮ

09.03.10 : ಪುತ್ತೂರು ತಾಲೂಕಿನ ಹಿರೆಬಂಡಾಡಿಯಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಜಾಗೃತಿ ಕಾನೂನು ಅರಿವು ಕಾರ್ಯಕ್ರಮ ನಡೆಯಿತು.

ಪುತ್ತೂರು ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರ, ಜನಶಿಕ್ಷಣ ಟ್ರಸ್ಟ್, ಹಿರೇಬಂಡಾಡಿ ಗ್ರಾಮ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸ್ತ್ರೀಶಕ್ತಿ, ಸ್ವಸಹಾಯ ಸಂಘಗಳ ಸಹಭಾಗಿತ್ವದಲ್ಲಿ ನಡೆದ ಈ ಮಹಿಳಾ ಜಾಗೃತಿ ಸಮಾವೇಶವನ್ನು ಪಂಚಾಯತ್ ಅಧ್ಯಕ್ಷೆ ವೆಂಕಮ್ಮ ದೀಪ ಬೆಳಗಿಸಿ ಉದ್ಘಾಟಿಸಿದರು. ಜನಶಿಕ್ಷಣ ಟ್ರಸ್ಟ್ನ ನಿರ್ದೇಶಕ ಕೃಷ್ಣ ಮೂಲ್ಯ ಮಹಿಳಾ ಜಾಗೃತಿಯ ಅಗತ್ಯದ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನ್ಯಾಯವಾದಿಗಳಾದ ಭಾರತಿ ಮತ್ತು ಗೀತರವರು ಕೌಟುಂಬಿಕ ದೌರ್ಜನ್ಯ ತಡೆ ಕಾಯಿದೆ, ಮಹಿಳೆಯರ ಆಸ್ತಿ ಹಕ್ಕು, ಜೀವನಾಂಶ, ಗ್ರಾಹಕರ ಹಕ್ಕು ಮತ್ತಿತರ ಮಹಿಳಾ ಪರ ಕಾನೂನು ಕಾಯಿದೆ, ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.

ಅಂಗನವಾಡಿ ಮೇಲ್ವಿಚಾರಕಿ ಸುಜಾತ, ಸ್ತ್ರೀಶಕ್ತಿ ಗೊಂಚಲಿನ ಅಧ್ಯಕ್ಷೆ ರೆಹಮತ್, ಪಂಚಾಯತ್ ಸದಸ್ಯರಾದ ಚಂದ್ರಾವತಿ, ಕುಸುಮ ಸಂವಾದದಲ್ಲಿ ಭಾಗವಹಸಿದರು. ಸಾಂತ್ವನ ಕೇಂದ್ರದ ಕೌನ್ಸಿಲರ್ ರಶ್ಮಿ ಕಾರ್ಯಕ್ರಮ ನಿರ್ವಹಿಸಿದರು. ಅರುಣಾ ಸ್ವಾಗತಿಸಿ, ಗಣೇಶ್ ವಂದಿಸಿದರು. ಪಂಚಾಯತ್ ಸದಸ್ಯರಾದ ಪ್ರಕಾಶ್ ರೈ, ನೋಡಲ್ ಎನ್.ಜಿ.ಒ ಸಂಯೋಜಕರಾದ ಗಣೇಶ್, ಸಮಾಜ ಕಾರ್ಯಕರ್ತರಾದ ಹರೀಶ, ಮಾಲತಿ, ಪದ್ಮಾವತಿ, ಹುಸೈನ್ ಹಾಗೂ ಅಂಗನವಾಡಿ ಕಾರ್ಯ ಕರ್ತೆಯರು, ಸ್ವಸಹಾಯ ಸಂಘ, ಸ್ತ್ರೀಶಕ್ತಿ ಗುಂಪುಗಳ ಪದಾಧಿಕಾರಿಗಳು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.
 


ಇನ್ನಷ್ಟು ಸುದ್ದಿಗಳು  

ಹಿಂದಿನ ಸುದ್ದಿಗಳು

 

 


 
 

Coastal Times video news


Anupama Monthly Magazine



Mega TV

 Videos Clip


Vinayaka Furniture

10-20%  Special Discount


 Search Engine Marketing & Optimization


ಸುದ್ದಿ ಮುಖ್ಯಾಂಶಗಳು


ಐಟಿಐ ನೌಕರರ ಸಮಸ್ಯೆ, ಮಾರ್ಚ್ 11 ರಂದು ಧರಣಿ ಸತ್ಯಾಗ್ರಹ


ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ

 ಆಮಂತ್ರಣ ಪತ್ರಿಕೆ ಬಿಡುಗಡೆ.


ಪತ್ರಿಕಾ ಸ್ವಾತಂತ್ರ್ಯಕ್ಕೆ ಅಡ್ಡಿ,

ಆರೋಪಿಗಳ ಶೀಘ್ರ ಬಂಧನಕ್ಕೆ ಆಗ್ರಹ


ಬಿಬಿಎಂಪಿ ಚುನಾವಣೆ ಮಾರ್ಚ್ 28 ಕ್ಕೆ


ಕರಾವಳಿ ಕಾಲೇಜಿನಲ್ಲಿ "ಗಗನ್-2010"


ಆದರ್ಶ ಸಮಾಜ ಮತ್ತು ಪ್ರವಾದಿ ಮುಹಮ್ಮದ್ ರ ಜೀವನ : ವಿಚಾರ ಗೋಷ್ಠಿ


ರಾಜ್ಯ ಬಜೆಟ್ ಮುಖ್ಯಾಂಶಗಳು


ಕಿರುತೆರೆ ನಟ ಅನಿಲ್ ಕಾಮತ್ ನಿಧನ


ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಪ್ರಯಾಣ ದರ ಹೆಚ್ಚಳ


ರಾಷ್ಟ್ರ ಲಾಂಛನ ಬಳಸಲು ಮಾರ್ಗದರ್ಶನ


ನಿರಂತರ ವಿದ್ಯುತ್ ಒದಗಿಸಲು

ಸಿಪಿಐಎಂ ಧರಣಿ


ಮಹಿಳೆಯರ ಸಶಕ್ತತೆಗೆ ಸಾಮೂಹಿಕ ಪ್ರಯತ್ನ ಅಗತ್ಯ - ರೋಹಿಣಿ


ಉಳ್ಳಾಲದಲ್ಲಿ ಗೇರು ಮೇಳ-2010 ಉದ್ಘಾಟನೆ


ಕನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ.


ದ,ಕ ಜಿಲ್ಲಾ ಇಂಟಕ್ ಸಮಿತಿ ವತಿಯಿಂದ ಮೂಡಾದಲ್ಲಿ ಪ್ರತಿಭಟನೆ.


ಪುರಭವನದಲ್ಲಿ ರಾಜ್ಯ ಮಟ್ಟದ

ಬ್ಯಾರಿ ಮಹಿಳಾ ಸಮ್ಮೇಳನ


 

 

 

 

 

Type Your Comments



© Copyright www.megamedianews.com  All Rights Reserved