ಕೊಲ್ಲೂರು ರಥದ ಚಕ್ರಕ್ಕೆ ಸಿಲುಕಿ ಭಕ್ತನ ಸಾವು

11.03.10 : ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ಮಹಾರಥೋತ್ಸವದ ವೇಳೆ ನೂಕುನುಗ್ಗಲಿನಿಂದ ರಥದ ಚಕ್ರಕ್ಕೆ ಸಿಲುಕಿ ಕೇರಳದ ಭಕ್ತರೊಬ್ಬರು ಸಾವನ್ನಪ್ಪಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ.

ರಥೋತ್ಸವಕ್ಕಾಗಿ ನೆರೆಯ ತಮಿಳುನಾಡು, ಕೇರಳ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಬಂದಿದ್ದ ಸಾವಿರಾರು ಸಂಖ್ಯೆಯ ಭಕ್ತರು ದೇಗುಲದ ರಥಬೀದಿ ಹಾಗೂ ಮಹಾದ್ವಾರದ ಬಳಿ ನೆರೆದಿದ್ದರು. ರಥೋತ್ಸವದ ವಿಧಿನಿಧಾನಗಳು ಮುಗಿದು ರಥ ಎಳೆಯಲು ಆರಂಭಿಸಿದ ಸಂದರ್ಭದಲ್ಲಿ ಅಶ್ವಥ ಮರವೊಂದರ ರೆಂಬೆಗಳಿಂದ ತಪ್ಪಿಸಲು ರಥವನ್ನು ಆಕಸ್ಮಿಕವಾಗಿ ತಿರುಗಿಸಿದಾಗ ಈ ದುರ್ಘಟನೆ ನಡೆದಿದೆ ಎಂದು ದೇವಾಲಯದ ಮೂಲಗಳು ತಿಳಿಸಿವೆ.

ರಥ ತಿರುಗಿದ್ದರಿಂದ ಗಾಬರಿಗೊಂಡ ಭಕ್ತ ಸಮೂಹ ತಳ್ಳಾಟದಲ್ಲಿ ತೊಡಗಿದ್ದರಿಂದ ಕೇರಳ ಮೂಲದ ಭಕ್ತರೊಬ್ಬರ ಮೇಲೆ ರಥದ ಗಾಲಿಗಳು ಸಾಗಿ ಹೋಗಿದೆ. ತೀವ್ರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಸಾಗಿಸುವ ವೇಳೆಯಲ್ಲೇ ಸಾವನ್ನಪ್ಪಿದ್ದಾರೆ. ಮತ್ತಿಬ್ಬರು ಭಕ್ತರು ತೀವ್ರವಾಗಿ ಗಾಯಗೊಂಡಿದ್ದಾರೆ. ಸಾವನ್ನಪ್ಪಿದ ವ್ಯಕ್ತಿಯನ್ನು ಕೇರಳ ಕಲ್ಲಿಕೋಟೆಯ ಕೆ.ವಿ.ಬಾಬು ಎನ್ನಲಾಗಿದೆ.


ಇನ್ನಷ್ಟು ಸುದ್ದಿಗಳು  

ಹಿಂದಿನ ಸುದ್ದಿಗಳು

 

 


 
 

Coastal Times video news


Anupama Monthly Magazine



Mega TV

 Videos Clip


Vinayaka Furniture

10-20%  Special Discount


 Search Engine Marketing & Optimization


ಸುದ್ದಿ ಮುಖ್ಯಾಂಶಗಳು


ದಿ ಸೆಕೆಂಡ್ ಗೇರ್ ' ಧರ್ಮಸ್ಥಳದಲ್ಲಿ ಬಿಡುಗಡೆ.


ಮಹಾನಗರ ಪಾಲಿಕೆ ಪರಿಸ್ಕೃತ ಕಟ್ಟಡ

ತೆರಿಗೆ ದರ


ಮಹಿಳಾ ಜಾಗೃತಿ

ಕಾನೂನು ಅರಿವು ಕಾರ್ಯಕ್ರಮ


ಐಪಿಎಲ್ ಕ್ರಿಕೆಟ್ : ಮಧ್ಯ ನಿಷೇದ


ಕೊಂಕಣಿ ಗಾನಕೋಗಿಲೆ

ವಿಲ್ಫಿ ರೆಬಿಂಬಸ್ ಇನ್ನಿಲ್ಲ


ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ

 ಆಮಂತ್ರಣ ಪತ್ರಿಕೆ ಬಿಡುಗಡೆ.


ಪತ್ರಿಕಾ ಸ್ವಾತಂತ್ರ್ಯಕ್ಕೆ ಅಡ್ಡಿ,

ಆರೋಪಿಗಳ ಶೀಘ್ರ ಬಂಧನಕ್ಕೆ ಆಗ್ರಹ


ಬಿಬಿಎಂಪಿ ಚುನಾವಣೆ ಮಾರ್ಚ್ 28 ಕ್ಕೆ


ಕರಾವಳಿ ಕಾಲೇಜಿನಲ್ಲಿ "ಗಗನ್-2010"


ಆದರ್ಶ ಸಮಾಜ ಮತ್ತು ಪ್ರವಾದಿ ಮುಹಮ್ಮದ್ ರ ಜೀವನ : ವಿಚಾರ ಗೋಷ್ಠಿ


ರಾಜ್ಯ ಬಜೆಟ್ ಮುಖ್ಯಾಂಶಗಳು


ಕಿರುತೆರೆ ನಟ ಅನಿಲ್ ಕಾಮತ್ ನಿಧನ


ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಪ್ರಯಾಣ ದರ ಹೆಚ್ಚಳ


ರಾಷ್ಟ್ರ ಲಾಂಛನ ಬಳಸಲು ಮಾರ್ಗದರ್ಶನ


ನಿರಂತರ ವಿದ್ಯುತ್ ಒದಗಿಸಲು

ಸಿಪಿಐಎಂ ಧರಣಿ


Type Your Comments



© Copyright www.megamedianews.com  All Rights Reserved