|
ರಿಕ್ಷಾ
ಮತ್ತು ಬಸ್ಸುಗಳ ಡಿಕ್ಕಿ ಓರ್ವನ ಸಾವು


11.03.10
ಮಂಗಳೂರು : ರಾಷ್ಟ್ರೀಯಾ ಹೆದ್ದಾರಿ ೧೭ರಲ್ಲಿ ನಂತೂರ್
ಪದವು ಹೈಸ್ಕೂಲ್ ಬಳಿಯಲ್ಲಿ
ಗುರುವಾರ ಬೆಳಿಗ್ಗೆ 9 ಗಂಟೆ ಗೆ ಆಟೋ ರಿಕ್ಷಾ ಮತ್ತು ಬಸ್ಸು ಗಳ ನಡುವೆ ಡಿಕ್ಕಿ ಸಂಭವಿಸಿ ಓರ್ವ
ವ್ಯಕ್ತಿ ಮೃತ ಪಟ್ಟು ಮೂವರಿಗೆ ಗಾಯವಾಗಿದೆ .
ಕುತ್ತೆತೂರಿನಿಂದ ಮಂಗಳಾದೇವಿಗೆ ಹೋಗುತ್ತಿದ್ದ
’ರೂಟ್ ನಂ 15 ಭೂಮಿಕ’ ಹೆಸರಿನ ಸಿಟಿ ಬಸ್
(ಕೆ ಎ 19:ಬಿ 301) ನಂತೂರಿನಿಂದ ಕೆಪಿಟಿ ಕಡೆಗೆ ಹೋಗುತ್ತಿದ್ದ
’ಶ್ರೀ ಸತ್ಯದೇವತೆ’ ಹೆಸರಿನ ರಿಕ್ಷಾ(ಕೆ
ಎ 19: ಬಿ 7573)ಕ್ಕೆ ಮುಖಾಮುಖಿ ಡಿಕ್ಕಿ ಹೊಡೆದ
ಪರಿಣಾಮ, ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದೆ.
ಆಟೋದಲ್ಲಿದ್ದ
ಮೂಡಬಿದ್ರೆ ಸುಭಾಷ್ ನಗರದ ಸಬೀರ್ ಅಹ್ಮದ್ ಅವರ ಪುತ್ರ
ಮಹಮ್ಮದ್ ಮುಜಿಮ್(19) ಅವರನ್ನು
ತುರ್ತು ನಿಗಾ ಘಟಕಕ್ಕೆ ದಾಖಲಿಸತ್ತಾದರು ಚಿಕಿತ್ಸೆ ಫಲಕಾರಿಯಾಗದೇ
ಮ್ರತ ಪಟ್ಟಿದ್ದಾರೆ..
ಮಹಮ್ಮದ್
ಮುಜಾಮಿಲ್(21) ಮತ್ತು ರಿಕ್ಷಾ ಚಾಲಕ
ನಾರಾಯಣ(40) ಗಾಯಗಳಾಗಿದ್ದು
ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಸ್ ಚಾಲಕ ಪರಾರಿಯಾಗಿದ್ದು. ಕದ್ರಿ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.


|