|
ಬಂದರಿನಲ್ಲಿ ಸರಳವಿವಾಹ ಮತ್ತು
ಸನ್ಮಾನ ಕಾರ್ಯಕ್ರಮ

11.03.10 ಟಿ.ಸಿ. ಪ್ರೆಂಡ್ಸ್ ಬೀಬಿ ಅಲಾಬಿ ರಸ್ತೆ
ಮಂಗಳೂರು ಇವರು ಮಂಗಳೂರಿನ ಬಂದರಿನಲ್ಲಿ ಮುಸ್ಲಿಂ ಸಮುದಾಯದ ಎರಡು ಜೋಡಿಗಳಿಗೆ ಸರಳ ವಿವಾಹ
ವನ್ನು ಅಲ್ಹಾಜ್ ಶೈಖುನಾ ತ್ವಾಕಾ ಅಹ್ಮ್ಮದ್ ಮುಸ್ಲಿಯಾರ್ ಖಾಝಿ ಮಂಗಳೂರು ಇವರ ನೇತೃತ್ವದಲ್ಲಿ
ಮಾರ್ಚ್ 11 ಗುರುವಾರ ಬೆಳಿಗ್ಗೆ 11.00 ಗಂಟೆಗೆ ನೆರವೇರಿಸಿದರು.

ಅಲ್ ಹಾಜ್ ಶೈಖುನಾ ತ್ವಾಕಾ ಅಹ್ಮ್ಮದ್ ಮುಸ್ಲಿಯಾರ್ ಖಾಝಿ
ಮಂಗಳೂರು ಇವರ ದುವಾ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು ಜನಾಬ್ ಅಲ್ ಹಾಜ್
ಯೆನೆಪೋಯ ಅಬ್ದುಲ್ಲ ಕುಂಞ ಉದ್ಘಾಟಿಸಿದರು, ಅಧ್ಯಕ್ಷತೆಯನ್ನು ಜನಾಬ್ ಹಾಜಿ.ಬಿ. ಅಬ್ದುಲ್ ಸಲಾಂ
ಅದ್ಯಕ್ಷರು ಟಿ.ಸಿ.ಪ್ರೆಂಡ್ಸ್ ಬಂದರ್, ಮಂಗಳೂರು ಇವರು ವಹಿಸಿದ್ದರು.
ಈ ಸಂದರ್ಭದಲ್ಲಿ ಅಲ್ ಹಾಜ್ ಶೈಖುನಾ ತ್ವಾಕಾ ಅಹ್ಮ್ಮದ್
ಮುಸ್ಲಿಯಾರ್ ಖಾಝಿ ಮಂಗಳೂರು, ಜನಾಬ್ ಅಲ್ ಹಾಜ್ ಯೆನೆಪೋಯ ಅಬ್ದುಲ್ಲ ಕುಂಞ, ಅಧ್ಯಕ್ಷರು
ಕೇಂದ್ರ ಜುಮ್ಮಾ ಮಸೀದಿ, ಮಂಗಳೂರು, ಹಾಜಿ ಕೆ.ಎಸ್. ಮಹಮ್ಮದ್ ಮಸೂದ್ ಮಾಜಿ ಎಂ.ಎಲ್.ಸಿ, ಅಲ್
ಹಾಜ್ ರಶೀದ್ ಕೋಶಾಧಿಕಾರಿ ಕೇಂದ್ರ ಜುಮ್ಮಾ ಮಸೀದಿ, ಮಂಗಳೂರು, ಅಲ್ ಹಾಜ್ ಮಹಮ್ಮದ್ ಹನೀಪ್
ಕಾರ್ಯದರ್ಶಿ ಮುಸ್ಲಿಂ ಸೆಂಟ್ರಲ್ ಕಮಿಟಿ, ಜನಾಬ್ ಬಾಷಾ ತಂಙಂಳ್ ಟ್ರಸ್ಟೀ ಕೇಂದ್ರ ಜುಮ್ಮಾ
ಮಸೀದಿ, ಮಂಗಳೂರು, ಇವರುಗಳನ್ನು ಸನ್ಮಾನಿಸಲಾಯಿತು.

ಮಖ್ಯ ಅಥಿತಿಗಳಾಗಿ ಅಲ್ ಹಾಜ್ ಇಬ್ರಾಹಿಂ ದಾರಿಮಿ, ಅಲ್
ಹಾಜ್ ಸಾಲಿ ಉಸ್ತಾದ್, ಅಲ್ ಹಾಜ್ ಮನ್ಸೂರ್ ಅಹ್ಮದ್, ಜನಾಬ್ ಕೆ.ಇ. ಅಶ್ರಪ್, ಜನಾಬ್
ಡಿ.ಎಂ ಅಸ್ಲಾಂ, ಅಲ್ ಹಾಜ್ ಬಿ. ಅಬ್ದುಲ್ ಅಜೀಜ್, ಜನಾಬ್ ಲತೀಫ್ ಎಸ್.ಕೆ, ಅಲ್ ಹಾಜ್
ಅಬ್ದುಲ್ ಹಮೀದ್, ಜನಾಬ್ ಎಂ. ಮೆಹಬೂಬ್, ಅಲ್ ಹಾಜ್ ಅಬ್ದುಲ್ ಸಮದ್ ಉಪಸ್ಥಿತರಿದ್ದರು.
ಸರಳ ವಿವಾಹದಲ್ಲಿ ಬೆಂಗರೆ ಕಸಬಾದ ಸಂಶುದ್ದೀನ್ ಮತ್ತು
ಜೊಹರಾ ಹಾಗೂ ಉಳಾಬೆಟ್ಟುವಿನ ಅಬ್ದುಲ್ ರಶೀದ್ ಮತ್ತು ಫೌಜಿಯಾಬಾನು ಜೋಡಿಗಳ ನಡುವೆ ನಿಖಾ
ನಡೆಯಿತು. ಭಾಗವಹಿಸಿದ ವರನ ಕಡೆಯವರಿಗೆ ಟಿ.ಸಿ ಪ್ರೆಂಡ್ಸ್ ವತಿಯಿಂದ 5.5 ಪವನ್ ಚಿನ್ನಾಭರಣ,
ವಧು ವರರಿಗೆ ಬಟ್ಟೆ ಮತ್ತು ಒಂದು ವಾಚ್ ಗಳ ಉಡುಗೊರೆಯನ್ನು ನೀಡಲಾಯಿತು.






|