|
ಪೋಪ್ಯುಲರ್ ಪ್ರಂಟ್ ಆಪ್ ಇಂಡಿಯಾ ದಕ್ಷಿಣ
ಕನ್ನಡ ಜಿಲ್ಲೆ
ಇವರಿಂದ ಮಸ್ಲಿಮರಿಗೆ ಮೀಸಲಾತಿ ;
ಸಾರ್ವಜನಿಕ ಸಭೆ

12.03.10
ಮಂಗಳೂರು : ಪೋಪ್ಯುಲರ್ ಪ್ರಂಟ್ ಆಪ್ ಇಂಡಿಯಾ ದಕ್ಷಿಣ
ಕನ್ನಡ ಜಿಲ್ಲೆ ಇದರ ಆಶ್ರಯದಲ್ಲಿ ಮುಸ್ಲಿಂ ಮೀಸಲಾತಿಗಾಗಿ ಬೃಹತ್ ಸಾರ್ವಜನಿಕ ಸಭೆ ಮಾರ್ಚ್
12 ಶುಕ್ರವಾರ ಮಧ್ಯಾಹ್ನ 3.30 ಕ್ಕೆ ಮಂಗಳೂರು ನೆಹರೂ ಮೈದಾನಿನಲ್ಲಿ ನಡೆಯಿತು.
ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಸಮಾನ ಹಕ್ಕು ಇರಬೇಕು,
ನಮ್ಮ ಸಮಾಜ ವಸಹಾತುಶಾಹಿಗಳ ಪ್ರಾಭಲ್ಯದಿಂದ ನಲುಗುತ್ತಿರುವುದರಿಂದ ಕೋಮುವಾದದ ಕಿಡಿ
ಜ್ವಾಲೆಯಾಗಿ ಹಬ್ಬುತ್ತಿದೆ, ಇದರಿಂದ ಮಸ್ಲೀಮರ ಮೀಸಲಾತಿಗೆ ದಕ್ಕೆಯಾಗುತ್ತಿದೆ ಎಂದು
ಪೋಪ್ಯುಲರ್ ಪ್ರಂಟ್ ಆಪ್ ಇಂಡಿಯಾ ಇದರ ರಾಷ್ಟ್ರೀಯ ಕಾರ್ಯದರ್ಶಿ ಕೆ.ಎಂ ಶರೀಫ್ ಹೇಳಿದರು.
ನಮ್ಮ ದೇಶದ ಸವಿಂದಾನವನ್ನು ಎತ್ತಿ ಹಿಡಿದು
ಪ್ರಜಾಪ್ರಭುತ್ವದ ಮೌಲ್ಯಗಳನ್ನು ಸಮಾಜ ಮುಖ್ಯವಾಹಿನಿಗೆ ತರಲು ಕೆ.ಎಫ್.ಡಿ ಪ್ರಯತ್ನಿಸುತ್ತಿದೆ
ಎಂದು ಅವರು ತನ್ನ ಪ್ರಧಾನ ಭಾಷಣದಲ್ಲಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿ.ಎಫ್.ಐ ನ
ರಾಜ್ಯಾಧ್ಯಕ್ಷ ಇಲಿಯಾಸ್ ಮುಹಮ್ಮದ್ ವಹಿಸಿದ್ದರು.
ಇ. ಅಬೂಬಕ್ಕರ್ ಸೋಶಿಯಲ್ ಡೆಮೋಕ್ರೆಟಿಕ್ ಪಾರ್ಟಿ,
ಡೀಕಯ್ಯ ಸಮಾಜ ಪರಿವರ್ತನಾ ಚಳುವಳಿಯ ಮುಖ್ಯಸ್ಥರು, ವಿಲಿಯಂ ಮರ್ಟಿಸ್ ಧರ್ಮಗುರುಗಳು ಉದ್ಯಾವರ
ಚರ್ಚ್, ಇವರುಗಳು ಮಸ್ಲಿಮರಿಗೆ ಮೀಸಲಾತಿಯ ಬಗ್ಗೆ ಮಾತನಾಡಿದರು.
ಮುಖ್ಯ ಅಥಿತಿಗಳಾಗಿ ಅನ್ವರ್ ಸಾದತ್, ಅಧ್ಯಕ್ಷರು
ಪಿ.ಎಫ್.ಐ ದಕ್ಷಿಣ ಕನ್ನಡ ಜಿಲ್ಲೆ, ಹೈದರ್ ನೀರ್ಸಾಲ್ ಅಧ್ಯಕ್ಷರು ಪಿ.ಎಫ್.ಐ ಪುತ್ತೂರು,
ಅಮೀರ್ ಹಂಝ ಅಧ್ಯಕ್ಷರು ಪಿ.ಎಫ್.ಐ ಉಡುಪಿ, ಅಕ್ಬರ್ ಆಲಿ ಅಧ್ಯಕ್ಷರು ಪಿ.ಎಫ್.ಐ ಚಿಕ್ಕಮಗಳೂರು.
ಬಾಗವಹಿಸಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಸಲೀಂ ಜಿ. ಸದಸ್ಯರು
ಪಿ.ಎಫ್.ಐ ಪುತ್ತೂರು ನೆರವೇರಿಸಿದರು. ಹೈದರ್ ನೀರ್ ಸಾಲ್ ವಂದಿಸಿದರು. ಕಾರ್ಯಕ್ರಮದ ಮೊದಲಿಗೆ
ಸ್ವಾಗತ ಭಾಷಣವನ್ನು ಅನ್ವರ್ ಸಾದತ್ ಅಧ್ಯಕ್ಷರು ಪಿ.ಎಫ್.ಐ ದ.ಕ. ಜಿಲ್ಲೆ ಇವರು
ನೆರವೇರಿಸಿದರು.







|