|
ಯೇನೆಪೋಯ ವೈದ್ಯಕೀಯ ಕಾಲೇಜಿನಲ್ಲಿ
"ಆಸ್ಟಿಯಮ್"-2010

12.03.10 :
ಮಂಗಳೂರು : ದೇರಳಕಟ್ಟೆಯ ಯೆನೆಪೋಯ ಮೆಡಿಕಲ್ ಕಾಲೇಜಿನ
ಆರನೇ ಘಟಿಕೋತ್ಸವ "ಆಟಿಯಮ್"-2010 ನವದೆಹಲಿಯ ನ್ಯಾಷನಲ್ ಅಕಾಡೆಮಿ ಆಫ್ ಮೆಡಿಕಲ್ ಸೈನ್ಸಸ್ನ
ಅಧ್ಯಕ್ಷ ಪ್ರೊ.ಪಿ.ಕೆ.ದಾವೆ ಉದ್ಘಾಟಿಸಿದರು,
ವೈದ್ಯಕೀಯ ವಿದ್ಯಾರ್ಥಿಗಳು ಪದವಿ ಪಡೆಯುವುದರಿಂದ
ಪದವೀಧರರು ಎಂಬುದನ್ನು ಸಾಬೀತು ಪಡಿಸುವುದರ ಜತೆಗೆ ಆ ಪದವಿ ಅವರನ್ನು
ವೃತ್ತಿಪರರನ್ನಾಗಿಸುತ್ತದೆ ಎಂದು ಪ್ರೊ.ಪಿ.ಕೆ.ದಾವೆ ಹೇಳಿದರು. ಅವರು ವೈದ್ಯಕೀಯ ಪದವೀಧರರಿಗೆ
ಹಾಗೂ ಸ್ನಾತಕೋತ್ತರ ಪದವೀಧರರಿಗೆ ಪದವಿ ಪ್ರದಾನ ಮಾಡಿ ಮಾತನಾಡಿದರು.
ಪದವಿ ಪಡೆಯುವುದಕ್ಕೆ ಕಠಿಣ ಶ್ರಮ ಪಡುವುದು
ವಿದ್ಯಾರ್ಥಿಗಳು ಮುಂದಕ್ಕೆ ಒಬ್ಬ ಉತ್ತಮ ವೈದ್ಯ ಎಂದು ನಿರೂಪಿಸಲು ಜ್ಞಾನ ಮತ್ತು
ಕೌಶಲ್ಯವನ್ನು ಹೆಚ್ಚಿಸುವ ಕಡೆಗೆ ಪ್ರಾಮುಖ್ಯತೆ ನೀಡುವುದು ಮುಖ್ಯ. ಆಧುನಿಕ ಜಗತ್ತು
ಸ್ಪರ್ಧಾತ್ಮಕವಾಗಿದ್ದು ಉತ್ತಮ ವೈದ್ಯರಿಗೆ ಮೊದಲ ಪ್ರಾಶಸ್ತ್ಯವಿದೆ. ಈ ನಿಟ್ಟಿನಲ್ಲಿ
ಪದವೀಧರರು ಕೇವಲ ಪದವಿಗೆ ತೃಪ್ತರಾಗದೆ ಉನ್ನತ ಶಿಕ್ಷಣಕ್ಕೂ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಯೆನೆಪೋಯ ವಿವಿಯ ಕುಲಪತಿ ಯೆನೆಪೋಯ ಅಬ್ದುಲ್ಲ ಕುಂಞಿ ಮಾತನಾಡಿ
ಪದವೀಧರರ ಮುಂದಿನ ಉನ್ನತ ಶಿಕ್ಷಣಕ್ಕೆ ಯೆನೆಪೋಯ ವಿವಿಯಲ್ಲಿ ಸದಾ ಸ್ವಾಗತವಿದೆ ಎಂದರು.
ಶೈಕ್ಷಣಿಕವಾಗಿ ಸಾಧಿಸಲು ಹೊರಟ ವಿದ್ಯಾರ್ಥಿಗಳಿಗೆ
ಯೆನೆಪೋಯ ವಿವಿಯಲ್ಲಿ ಸದಾ ಅವಕಾಶ ವಿದೆ. ಅದನ್ನು ಸಮರ್ಥವಾಗಿ ಬಳಸುವ ಮೂಲಕ ವಿದ್ಯಾರ್ಥಿಗಳು
ತಮ್ಮ ಪೋಷಕರ ಕನಸನ್ನು ನನಸು ಮಾಡಿ ಅವರಲ್ಲಿ ಸಾರ್ಥಕತೆ ಮೂಡಿಸಿದ್ದೀರಿ ಎಂದು ಉಪಕುಲಪತಿ
ಪ್ರೊ.ಸಯ್ಯಿದ್ ಅಖೀಲ್ ಅಹ್ಮದ್ ಹೇಳಿದರು.
ಇದೇ ಸಂದರ್ಭ 2004ರ ಬ್ಯಾಚಿನ ಪ್ರತಿಭಾನ್ವಿತ
ವಿದ್ಯಾರ್ಥಿನಿ ಡಾ.ಪೂಜಾ ದೊಡ್ಡಿಕೊಪ್ಪಾಡ್ ಅವರಿಗೆ ಜುಲೈಕಾ ಸ್ಮರಣಾರ್ಥ ಬಂಗಾರದ
ಪದಕವನ್ನುಯೆನೆಪೋಯ ಅಬ್ದುಲ್ಲ ಕುಂಞಿ ನೀಡಿ ಗೌರವಿಸಿದರು.
ಯೆನೆಪೋಯ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಗುಲಾಂ
ಜೀಲಾನಿ ಖಾದಿರಿ ಸ್ವಾಗತಿಸಿದರು. ಡಾ.ವೀಣಾ ವಾಸ್ವಾನಿ ಪದವೀಧರರ ಹೆಸರು ವಾಚಿಸಿದರು. ಡಾ.ನೀಲಂ
ಪುತ್ರನ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಗೈದರು. ಪ್ರೊ.ರವಿಶಂಕರ್ ಕಾರ್ಯಕ್ರಮ
ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಯೆನೆಪೋಯ ವಿವಿ ರಿಜಿಸ್ಟ್ರಾರ್ ಡಾ.ಜನಾರ್ದನ್, ಯೆನೆಪೋಯ
ಗ್ರೂಪ್ನ ಚೇರ್ಮೆನ್ ವೈ.ಮಹಮ್ಮದ್ ಕುಂಞಿ, ಕಾರ್ಯದರ್ಶಿ ಡಾ.ಅಖ್ತರ್ ಹುಸೈನ್, ಟ್ರಸ್ಟಿಗಳಾದ
ಅಬ್ದುಲ್ಲ ಜಾವೀದ್, ಮೊಹಿದ್ದಿನ್ ರಿಜ್ವಾನ್, ಖಾಲಿದ್ ಬಾವಾ, ವೈದ್ಯಕೀಯ ಅಧೀಕ್ಷಕ ಡಾ.ಮೂಸಾ,
ಪರೀಕ್ಷಾಂಗ ಕುಲಸಚಿವ ಡಾ.ಶಂಕರ್ ಭಟ್, ದಂತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ
ಡಾ.ಬಿ.ಎಚ್.ಶ್ರೀಪತಿ ರಾವ್ ಉಪಸ್ಥಿತರಿದ್ದರು.
|