|
ಸಂಗೀತ ನಿರ್ದೇಶಕ ಗುರುಕಿರಣ್ ಗೆ
ವಂದನಾ ಪ್ರಶಸ್ತಿ

14.03.10
ಮಂಗಳೂರು : ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಮತ್ತು ರೋಟರ್ಯಾಕ್ಟ್ ಕ್ಲಬ್ ಮಂಗಳೂರು ಸಿಟಿ
ಇವರ ಜಂಟಿ ಆಶ್ರಯದಲ್ಲಿ ಶನಿವಾರ ಮಾರ್ಚ್ 13ರ ಸಂಜೆ ಮಂಗಳೂರು ಕುಡ್ಲ ಕೋರ್ಟ್ ನ ಸಭಾಂಗಣದಲ್ಲಿ
ಮಂಗಳೂರಿನ ಗುರುಕಿರಣ್ ರವರಿಗೆ ಕನ್ನಡ ಚಿತ್ರೋದ್ಯಮದ ಸಂಗೀತ ಕ್ಷೇತ್ರದಲ್ಲಿ ಮಾಡಿದ ಅಪ್ರತಿಮ
ಸಾಧನೆಯನ್ನು ಪರಿಗಣಿಸಿ ವಂದನಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಗುರುಕಿರಣ್
ನಾನು ನನ್ನ ಸಂಗೀತ ಜೀವನವನ್ನು ಆರಂಭಿಸಿದ್ದೇ ಈ ನೆಲದಿಂದ. ನನ್ನ ಯಾವುದೇ ಸಾಧನೆ ಮಾಡಿದರೂ
ಅದರ ಋಣ ನನ್ನ ತಾಯಿನೆಲಕ್ಕೆ ಸಲ್ಲಬೇಕು ಎಂದು ಅವರು ಹೇಳಿದರು.
ಪ್ರಶಸ್ತಿಯನ್ನು ಪ್ರದಾನ ಮಾಡಿದ ಉಸ್ತುವಾರಿ ಸಚಿವ ಜೆ.
ಕೃಷ್ಣಪಾಲೇಮಾರ್ ಮಾತನಾಡಿ ಗುರುಕಿರಣ್ ರಂಥವರ ಸಾಧನೆಯ ಛಲವನ್ನು ರೂಢಿಸಿಕೊಂಡರೆ ನಾವು ಸಾಧಿಸಿ
ಬೇಕಾದುದರಲ್ಲಿ ಯಶಸ್ಸುಗಳಿಸುವುದರಲ್ಲಿ ಎರಡು ಮಾತಿಲ್ಲ ಎಂದು ಸಚಿವರು ಹೇಳಿದರು. ಸಮಯ
ವ್ಯರ್ಥ ಮಾಡದೆ ಜೀವನದಲ್ಲಿ ಏನನ್ನಾದರೂ ಸಾಧಿಸ ಬಹುದು ಎಂಬುದನ್ನು ಗುರುಕಿರಣ್ ತೋರಿಸಿ
ಕೊಟ್ಟಿದ್ದಾರೆ, ಪ್ರಶಸ್ತಿ ಸ್ವೀಕರಿಸಿದ ಅವರ ಭವಿಷ್ಯ ಉಜ್ವಲವಾಗಲೆಂದು ನನ್ನ ಹಾರೈಕೆ ಎಂದು
ಅವರು ನುಡಿದರು.

ಪ್ರಶಸ್ತಿ ಸಮಾರಂಭದಲ್ಲಿ ರೊಟೇರಿಯನ್ ಹರೀಶ್ ಅಡ್ಯಾರ್,
ರೊಟೇರಿಯನ್ ಡಾ| ದೇವದಾಸ್ ರೈ, ರೊಟೇರಿಯನ್ ಸೂರ್ಯಪ್ರಕಾಶ್ ಭಟ್, ರೊಟೇರಿಯನ್ ಹೆರಮಾನ್ ಸಿ.ಜೆ.
ಪಿರೇರಾ, ರೊಟೇರಿಯನ್ ದರ್ಶನ್ ಎ.ಡಿ. ಉಪಸ್ಥಿತರಿದ್ದರು.







 |