ಪುರಭವನದಲ್ಲಿ 16ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮುನ್ನುಡಿ

15.03.10 ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು ಕೊಡಿಯಾಲ್ ಬೈಲು ಮಂಗಳೂರು ಇದರ ವತಿಯಿಂದ ಮಂಗಳೂರು ಪುರಭವನದಲ್ಲಿ ಮಾರ್ಚ್ 15 ರಿಂದ ಮೂರುದಿನಗಳ ಕಾಲ ನಡೆಯುವ 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ರಾಷ್ಟ್ರದ್ವಜಾರೋಹಣ ಮಾಡುವ ಮೂಲಕ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಜೆ.ಕೃಷ್ಣ ಪಾಲೇಮಾರ್ ಸೋಮವಾರ ಮಾರ್ಚ್ 15ರ ಬೆಳಿಗ್ಗೆ 10.30ಕ್ಕೆ ಚಾಲನೆ ನೀಡಿದರು.

ಇದೇ ಸಂಧರ್ಭದಲ್ಲಿ ಕನ್ನಡ ಧ್ವಜಾರೋಹಣವನ್ನು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ ನೇರವೇರಿಸಿದರು. ಸಾಹಿತ್ಯ ಸಮ್ಮೇಳನದ ಧ್ವಜಾರೋಹಣವನ್ನು ಮಂಗಳೂರು ನಗರ ಪಾಲಿಕೆಯ ಮೇಯರ್ ಶ್ರೀಮತಿ ರಜನಿ ದುಗ್ಗಣ್ಣ ನೆರವೇರಿಸಿದರು. ಸಮ್ಮೇಳನದ ಇತರ ಧ್ವಜಗಳು ಈ ಸಂದರ್ಭದಲ್ಲಿ ಆರೋಹಣಗೊಂಡವು, ವಿದ್ಯಾರ್ಥಿಗಳಿಂದ ಕನ್ನಡ ಗೀತೆ, ರೈತಗೀತೆ ಗಳು ಮೊಳಗಿದವು.
ಮೆರವಣಿಗೆ:

 

ಕನ್ನಡದ ಭುವನೇಶ್ವರಿ ದಿಬ್ಬಣವನ್ನು ಸಂಜೆ 3 ಗಂಟೆಗೆ ವೇದ ಮೂರ್ತಿ ಶ್ರೀ ಲಕ್ಷ್ಮೀನಾರಾಯಣ ಆಸ್ರಣ್ಣರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಸಂತೋಷ್ ಕುಮಾರ್ ಭಂಡಾರಿ ಅಧ್ಯಕ್ಷರು ದ.ಕ. ಜಿಲ್ಲಾ ಪಂಚಾಯತ್ ತೆಂಗಿನ ಕಾಯಿ ಒಡೆಯುವ ಮೂಲಕ ಮೆರವಣಿಗೆಯನ್ನು ಆರಂಬಿಸಿದರು, ಭುವನೇಶ್ವರಿಗೆ ಪುಷ್ಪಾರ್ಚನೆಯನ್ನು ಕೆ.ಅಮರನಾಥ ಶೆಟ್ಟಿ ಅಧ್ಯಕ್ಷರು ಭಂಟರ ಸಂಘ ದ.ಕ ಜಿಲ್ಲೆ ಇವರು ನೆರವೇರಿಸಿದರು. ಸಾಂಸ್ಕೃತಿಕ ತಂಡಗಳಿಗೆ ದರ್ಮದರ್ಶಿ ಹರಿಕೃಷ್ಣ ಪುನರೂರು ಮತ್ತು ಮಾಜಿ ಮೇಯರ್ ಶಂಕರ್ ಭಟ್ ಚಾಲನೆ ನೀಡಿದರು. ಸಮ್ಮೇಳನಾಧ್ಯಕ್ಷರಾದ ಪಾದೆಕಲ್ಲು ನರಸಿಂಹ ಭಟ್ ಉಪಸ್ಥಿತರಿದ್ದರು.
ಸಮ್ಮೇಳನದ ಉದ್ಘಾಟನೆ:

ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಯಕ್ರಮಗಳ ಉದ್ಘಾಟನೆಯನ್ನು ಬೆಂಗಳೂರಿನ ಹಿರಿಯ ಸಾಹಿತಿಗಳಾದ ಎಚ್.ಎಸ್. ವೆಂಕಟೇಶ ಮೂರ್ತಿ ಇವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟನೆ ಮಾಡಿದರು.

ಉದ್ಘಾಟನೆಯ ಬಳಿಕ ಮಾತನಾಡಿದ ಎಚ್.ಎಸ್. ವೆಂಕಟೇಶ ಮೂರ್ತಿ ಎಲ್ಲಿಯವರೆಗೆ ಕನ್ನಡ ಮಕ್ಕಳ ಬಾಯಲ್ಲಿ ಉಳಿಯುವುದೋ ಅಲ್ಲಿಯವರೆಗೆ ಕನ್ನಡ ಅಳಿಯುವುದಿಲ್ಲ. ಕನ್ನಡವನ್ನು ಮಕ್ಕಳಿಗಾಗಿ ಉಳಿಸುವ ಕೆಲಸವನ್ನು ಸರಕಾರ ಮಾಡಬೇಕು ಎಂದು ಅವರು ಹೇಳಿದರು. ಶಾಲೆಗಳಲ್ಲಿ ಕನ್ನಡವನ್ನೇ ಪ್ರಧಾನ ಭಾಷೆಯನ್ನಾಗಿ ಬಳಸುವಲ್ಲಿ ಸರಕಾರದ ಪ್ರಯತ್ನ ಅಗತ್ಯವಿದೆ ಎಂದು ಹೇಳಿದರು.

ಯಾವುದು ಈಗ ವಾಸ್ತವದಲ್ಲಿಲ್ಲವೋ ಅದನ್ನು ನಾವು ಈಗ ಸಾಹಿತ್ಯದಲ್ಲಿ ಕಾಣತ್ತಿದ್ದೇವೆ, ಕವಿಗಳು ಕಟ್ಟಿದ ಉಚ್ಚ ಪರಂಪರೆಯ ಆ ಕಲ್ಪನೆಗಳು ಇಂದು ವಾಸ್ತವದಲ್ಲಿ ಕಾಣಸಿಗುದು ವಿರಳ ಎಂದರು, ಕ್ರಿಕೆಟ್ ನೋಡಲು ಟಿವಿ ಮುಂದೆ ಕುಳಿತು ಕೊಳ್ಳುವ ನಾವು ಸಾಹಿತ್ಯಾಭಾಸಕ್ಕಾಗಿ ಅಲ್ಪ ಸಮಯವನ್ನು ವಿನಿಯೋಗಿಸದಿಲ್ಲದಿರುವುದು ಸಾಹಿತ್ಯದ ಮತ್ತು ಕನ್ನಡದ ಬೆಳವಣಿಗೆಗೆ ದೊಡ್ಡ ಹೊಡೆತವಾಗಿದೆ ಎಂದು ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಹೇಳಿದರು.

ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ನಡೆದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಬುಹುಭಾಷಾ ವಿದ್ವಾಂಶರಾದ ಪಾದೆಕಲ್ಲು ನರಸಿಂಹ ಭಟ್ ವಹಿಸಿದ್ದರು.

ಸ್ವಾಗತ ಮತ್ತು ಆಶಯ ಭಾಷಣವನ್ನು ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ನೆರವೇರಿಸಿದರು. ಲೇಖಕರ ಪುಸ್ತಕ ಬಿಡುಗಡೆಯನ್ನು ದರ್ಮದರ್ಶಿ ಹರಿಕೃಷ್ಣ ಪುನರೂರು, ಶಾಸಕ ಯು.ಟಿ.ಖಾದರ್ ಮತ್ತು ಶಾಸಕ ಯೊಗೀಶ್ ಭಟ್ ನೆರವೇರಿಸಿದರು.

ಮುಖ್ಯ ಅಥಿತಿಗಳಾಗಿ ಸುಬ್ರಾಯ ಚೊಕ್ಕಾಡಿ, ಶ್ರೀಮತಿ ರಜನಿ ದುಗ್ಗಣ್ಣ, ಅಂಬಾತನಯ ಮುದ್ರಾಡಿ ಅಧ್ಯಕ್ಷರು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಎಸ್.ವಿ. ಭಟ್ ಅಧ್ಯಕ್ಷರು ಕೇರಳ ಗಡಿನಾಡ ಘಟಕ, ಪ್ರೋ. ರಾಧಾಕೃಷ್ಣ, ಡಾ| ಗಣೇಶ್ ಅಮೀನ್ ಸಂಕಮಾರ್, ಶೀನಾಥ್, ಯಶೋವರ್ಮ, ತಮ್ಮಯ್ಯ, ಮಿನಾಕ್ಷಿ ಗೌಡ, ಭುವನಾಭಿರಾಮ ಉಡುಪ ಮೊದಲಾದವರು ಉಪಸ್ಥಿತರಿದ್ದರು.

ವಂದನಾರ್ಪಣೆಯನ್ನು ಡಾ| ಗಣೇಶ್ ಅಮೀನ್ ಸಂಕಮಾರ್ ನೆರವೇರಿಸಿದರು, ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಮಂಜುಳಾ ಶೆಟ್ಟಿ ಮತ್ತು ಉಮೇಶ್ ಕೆ.ಆರ್. ನಿರ್ವಹಿಸಿದರು
 

16th Kannada Sahitya Sammelana Picture Gallery 1 (15.03.10)

16th Kannada Sahitya Sammelana Picture Gallery 2 (15.03.10)

16th Kannada Sahitya Sammelana Picture Gallery 3(15.03.10)

16th Kannada Sahitya Sammelana Picture Gallery 4 (15.03.10)


ಇನ್ನಷ್ಟು ಸುದ್ದಿಗಳು  

ಹಿಂದಿನ ಸುದ್ದಿಗಳ

 


 


Coastal Times video news


Anupama Monthly Magazine



Mega TV

 Videos Clip


Vinayaka Furniture

10-20%  Special Discount


 Search Engine Marketing & Optimization


ಸುದ್ದಿ ಮುಖ್ಯಾಂಶಗಳು


ಸಂಗೀತ ನಿರ್ದೇಶಕ ಗುರುಕಿರಣ್ ಗೆ

ವಂದನಾ ಪ್ರಶಸ್ತಿ


ಮಸ್ಲಿಮರಿಗೆ ಮೀಸಲಾತಿ ; ಸಾರ್ವಜನಿಕ ಸಭೆ


ಯೇನೆಪೋಯ ವೈದ್ಯಕೀಯ ಕಾಲೇಜಿನಲ್ಲಿ "ಆಸ್ಟಿಯಮ್"-2010


ಬಂದರಿನಲ್ಲಿ ಸರಳವಿವಾಹ ಮತ್ತು ಸನ್ಮಾನ ಕಾರ್ಯಕ್ರಮ


ಅನುದಾನಿತ ಐಟಿಐ ಸಿಬ್ಬಂದಿಗಳ ಮತ್ತು ವಿದ್ಯಾರ್ಥಿಗಳ ಪ್ರತಿಭಟನೆ


ಕೊಲ್ಲೂರು ರಥದ ಚಕ್ರಕ್ಕೆ ಸಿಲುಕಿ ಭಕ್ತನ ಸಾವು


16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ   "ಸಾಂಸ್ಕ್ರತಿಕ ಪ್ರತಿಭಾ ಸಂಭ್ರಮದ ಅಹ್ವಾನ ಪತ್ರಿಕೆ" ಬಿಡುಗಡೆ


ದಿ ಸೆಕೆಂಡ್ ಗೇರ್ ' ಧರ್ಮಸ್ಥಳದಲ್ಲಿ ಬಿಡುಗಡೆ.


ಮಹಾನಗರ ಪಾಲಿಕೆ ಪರಿಸ್ಕೃತ ಕಟ್ಟಡ

ತೆರಿಗೆ ದರ


ಮಹಿಳಾ ಜಾಗೃತಿ

ಕಾನೂನು ಅರಿವು ಕಾರ್ಯಕ್ರಮ


ಐಪಿಎಲ್ ಕ್ರಿಕೆಟ್ : ಮಧ್ಯ ನಿಷೇದ


ಕೊಂಕಣಿ ಗಾನಕೋಗಿಲೆ

ವಿಲ್ಫಿ ರೆಬಿಂಬಸ್ ಇನ್ನಿಲ್ಲ


ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ

 ಆಮಂತ್ರಣ ಪತ್ರಿಕೆ ಬಿಡುಗಡೆ.


 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Type Your Comments



© Copyright www.megamedianews.com  All Rights Reserved