|
ದ್ವಿತೀಯ ಪಿಯುಸಿ ಪರೀಕ್ಷೆ ಅವ್ಯವಹಾರ ತಡೆಗೆ
ಜಿಲ್ಲಾ ಮಟ್ಟದ ಸಮಿತಿ

16.03.10 ಮಂಗಳೂರು
: ಮಾರ್ಚ್ 18ರಿಂದ 31ರವರೆಗೆ ಜರುಗಲಿರುವ ದ್ವಿತೀಯ ಪಿಯುಸಿ ಪರೀಕ್ಷೆ ಸುಲಲಿತವಾಗಿ ನಡೆಯಲು
ಹಾಗೂ ಯಾವುದೇ ರೀತಿಯ ಅವ್ಯವಹಾರಗಳನ್ನು ತಡೆಗಟ್ಟಲು ಜಿಲ್ಲಾ ಮಟ್ಟದ ಸಮಿತಿ ರಚಿಸಲಾಗಿದೆ.
ಮಂಗಳೂರು ಕಂದಾಯ ಉಪವಿಭಾಗಕ್ಕೆ ಜಿಲ್ಲಾಧಿಕಾರಿಗಳು
ಮುಖ್ಯಸ್ಥರಾಗಿದ್ದು, ಪೊಲೀಸ್ ಅಧೀಕ್ಷಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
ಉಪನಿರ್ದೇಶಕರು, ದ.ಕ. ಜಿಲ್ಲಾ ಪಂಚಾಯತ್ ಉಪಕಾರ್ಯ
ದರ್ಶಿಗಳು, ಮೀನುಗಾರಿಕೆ ಇಲಾಖೆ ಉಪನಿರ್ದೇಶಕರು,
ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ಸದಸ್ಯರಾಗಿರುತ್ತಾರೆ.
ಪುತ್ತೂರು ಕಂದಾಯ ಉಪವಿಭಾಗಕ್ಕೆ ಸಿಇಒ ಜಿಲ್ಲಾ ಪಂಚಾಯತ್
ಅವರು ತಂಡದ ಮುಖ್ಯಸ್ಥರಾಗಿದ್ದು, ಉಪಪೊಲೀಸ್ ಅಧೀಕ್ಷಕರು, ಜಂಟಿ ನಿರ್ದೇಶಕರು ಕೃಷಿ ಇಲಾಖೆ,
ಜಿಲ್ಲಾ ಸಮಾಜ ಕಲ್ಯಾಣ ಇಲಾಖಾಧಿಕಾರಿ, ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ
ಸದಸ್ಯರಾಗಿರುತ್ತಾರೆ. ಮಂಗಳೂರು ತಾಲೂಕು ಮಟ್ಟದ ಸಮಿತಿಗೆ ಸಹಾಯಕ ಕಮಿಷನರ್ ಮಂಗಳೂರು
ಮುಖ್ಯಸ್ಥರಾಗಿದು, ಮನಾಪ ಜಂಟಿ ಆಯುಕ್ತರು, ತಹಸೀಲ್ದಾರ್ ಮಂಗಳೂರು, ಮುಖ್ಯಾಧಿಕಾರಿ
ನಗರಪಂಚಾಯತ್ ಮುಲ್ಕಿ, ಸರ್ಕಲ್ ಇನ್ಸ್ ಪೆಕ್ಟರ್ ಆಫ್ ಪೊಲೀಸ್ ಸದಸ್ಯರಾಗಿರುತ್ತಾರೆ.
ಮೂಡಬಿದ್ರೆ ತಾಲೂಕು ವ್ಯಾಪ್ತಿಗೆ ಸಹಾಯಕ ಕಮಿಷನರ್ ಮಂಗಳೂರು ಮುಖ್ಯಸ್ಥರಾಗಿದ್ದು, ವಿಶೇಷ
ತಹಸೀಲ್ದಾರ್ ಮೂಡಬಿದ್ರೆ, ಮುಖ್ಯಾಧಿಕಾರಿ ಪುರಸಭೆ, ಮೂಡಬಿದರೆ, ಸರ್ಕಲ್ ಇನ್ಸ್ ಪೆಕ್ಟರ್ ಆಫ್
ಪೊಲೀಸ್ ಮೂಡಬಿದ್ರೆ ಪೊಲೀಸ್ ಠಾಣೆ ಸದಸ್ಯರಾಗಿರುತ್ತಾರೆ.
ಬಂಟ್ವಾಳ ತಾಲೂಕು ಸಹಾಯಕ ಕಮಿಷನರ್ ಬಂಟ್ವಾಳ ವ್ಯಾಪ್ತಿಗೆ
ಮುಖ್ಯಸ್ಥರಾಗಿದ್ದು,ತಹಸೀಲ್ದಾರರು ಬಂಟ್ವಾಳ, ಮುಖ್ಯಾಧಿಕಾರಿ ಪುರಸಭೆ ಬಂಟ್ವಾಳ,
ಕಾರ್ಯನಿರ್ವಹಣಾಧಿಕಾರಿ ತಾಲೂಕುಪಂಚಾಯತ್ ಬಂಟ್ವಾಳ, ಸರ್ಕಲ್ ಇನ್ಸ್ ಪೆಕ್ಟರ್ ಆಫ್ ಪೊಲೀಸ್
ಬಂಟ್ವಾಳ ಸದಸ್ಯರಾಗಿರುತ್ತಾರೆ.
ಪುತ್ತೂರು ತಾಲೂಕು ವ್ಯಾಪ್ತಿಗೆ ತಾಲೂಕು ಸಹಾಯಕ ಕಮಿಷನರ್
ಪುತ್ತೂರು ಮುಖ್ಯಸ್ಥರಾಗಿದ್ದು, ತಹಸೀಲ್ದಾರರು ಪುತ್ತೂರು, ಮುಖ್ಯಾಧಿಕಾರಿ ಪುರಸಭೆ ಪುತ್ತೂರು,
ಕಾರ್ಯನಿರ್ವಹಣಾಧಿಕಾರಿ ತಾಲೂಕುಪಂಚಾಯತ್ ಪುತ್ತೂರು, ಸರ್ಕಲ್ ಇನ್ಸ್ ಪೆಕ್ಟರ್ ಆಫ್ ಪೊಲೀಸ್
ಪುತ್ತೂರು ನಗರ, ಮತ್ತು ಗ್ರಾಮಾಂತರ ಪೊಲೀಸ್ ಸದಸ್ಯರಾಗಿರುತ್ತಾರೆ.
ಸುಳ್ಯ ತಾಲೂಕಿಗೆ ಸಹಾಯಕ ಕಮಿಷನರ್ ಸುಳ್ಯ
ಮುಖ್ಯಸ್ಥರಾಗಿದ್ದು,ತಹಸೀಲ್ದಾರರು ಸುಳ್ಯ , ಮುಖ್ಯಾಧಿಕಾರಿ ಪುರಸಭೆ ಸುಳ್ಯ ,
ಕಾರ್ಯನಿರ್ವಹಣಾಧಿಕಾರಿ ತಾಲೂಕುಪಂಚಾಯತ್ ಸುಳ್ಯ, ಸರ್ಕಲ್ ಇನ್ಸ್ ಪೆಕ್ಟರ್ ಆಫ್ ಪೊಲೀಸ್
ಸುಳ್ಯ ಸದಸ್ಯರಾಗಿರುತ್ತಾರೆ.
ಬೆಳ್ತಂಗಡಿ ತಾಲೂಕಿಗೆ ಸಹಾಯಕ ಕಮಿಷನರ್ ಪುತ್ತೂರು
ಮುಖ್ಯಸ್ಥರಾಗಿದ್ದು, ತಹಸೀಲ್ದಾರರು ಬೆಳ್ತಂಗಡಿ, ಮುಖ್ಯಾಧಿಕಾರಿ ಪುರಸಭೆ ಬೆಳ್ತಂಗಡಿ,
ಕಾರ್ಯನಿರ್ವಹಣಾಧಿಕಾರಿ ತಾಲೂಕುಪಂಚಾಯತ್ ಬೆಳ್ತಂಗಡಿ, ಸರ್ಕಲ್ ಇನ್ಸ್ ಪೆಕ್ಟರ್ ಆಫ್ ಪೊಲೀಸ್
ಬೆಳ್ತಂಗಡಿ ಸದಸ್ಯರಾಗಿರುತ್ತಾರೆ.
ಎಲ್ಲ ತಂಡದ ಮುಖ್ಯಸ್ಥರು ಜಿಲ್ಲಾಧಿಕಾರಿಗಳಿಗೆ ಪರೀಕ್ಷಾ
ದಿನಗಳಲ್ಲಿ ಪ್ರತಿ ದಿನ ಪರೀಕ್ಷಾ ಸಂಬಂಧ ಆಗ್ಗಿಂದಾಗ್ಗೆ ವರದಿ ನೀಡಲು ಹಾಗೂ ಅವ್ಯವಹಾರ
ತಡೆಗಟ್ಟಲು ಕರ್ತವ್ಯ ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.
|