|
ರೆವರೆಂಡ್ ಪಾಲ್ ತಂಗಯ್ಯರಿಂದ ನಗರದಲ್ಲಿ
ಧಾರ್ಮಿಕ ಪ್ರವಚನ

18.06.10
ಮಂಗಳೂರು :
ಫುಲ್ ಗೋಸ್ಪಲ್ ಅಸೆಂಬ್ಲಿ ಆಫ್ ಗಾಡ್
ಚರ್ಚ್, ಇಂದಿರಾ ನಗರ ಬೆಂಗಳೂರು ಇವರ ಆಶ್ರಯದಲ್ಲಿ ಪವರ್
ಕಾನ್ಫರೆನ್ಸ್
ಕರ್ನಾಟಕ ಎಂಬ ಧಾರ್ಮಿಕ ಬೋಧನ ಸಭೆ ಮಂಗಳೂರಿನ ಬಲ್ಠದಲ್ಲಿರುವ ಡಾನ್ ಬಾಸ್ಕೋ
ಸಭಾಭವನದಲ್ಲಿ ಇಂದು (ಜೂನ್ 18) ರಂದು
ಬೆಳಿಗ್ಗೆ ಆರಂಭಗೊಂಡಿತು.

ಈ ಕಾರ್ಯಕ್ರಮ 2 ದಿನಗಳು ನಡೆಯಲಿದ್ದು, ಮೊದಲದಿನದ
ಧಾರ್ಮಿಕ ಪ್ರವಚನವನ್ನು ರೆವರೆಂಡ್ ಪಾಲ್
ತಂಗಯ್ಯರವರು ಉದ್ಘಾಟಿಸಿದರು. ಭೋದನೆಯ ಕನ್ನಡ ಅನುವಾದವನ್ನು ಗುರುಗಳಾದ ಪ್ಯಾರೀಸ್ ನಿರ್ವಹಿಸಿದರು.

ಎಲ್ಲರ ಬಾಳಿನಲ್ಲಿ ಮತ್ತು ದೇಶದಲ್ಲಿ ಒಂದು ಉಜ್ಜೀವನ ತರುವುದು ಈ ಸಭೆಯ ಉದ್ದೇಶವಾಗಿದೆ. ಈ 2
ದಿನದ ಸಭೆಯಲ್ಲಿ ತಂಗಯ್ಯರವರು ನಾಯಕನ ಗುಣಲಕ್ಷಣ, ನಾಯಕರನ್ನು ಬೆಳೆಸುವುದು, ಏಕಾಂತತೆ, ಓಇಕೋಸ್
ಸುವಾರ್ತೆ ಸೇವೆ ಮುಂತಾದ ವಿಷಯಗಳ ಬಗ್ಗೆ ಬೋದನೆ ನೀಡಲಿದ್ದಾರೆ. ಈ ಸಭೆಯನ್ನು ಮುಖ್ಯವಾಗಿ
ಕ್ರಿಶ್ಚಿಯನ್ರಿಗೆಂದೇ ಆಯೋಜಿಸಿಸಲಾಗಿದ್ದು, ಈಗಾಗಲೇ 500 ಕ್ಕೂ ಹೆಚ್ಚು ಮಂದಿ
ಧರ್ಮಾಭಿಮಾನಿಗಳು
ಭಾಗವಹಿಸಿದ್ದಾರೆ.
ಈ ಸಭೆಯಲ್ಲಿ ಭಾಗವಹಿಸುವವರು ನೋಂದಣಿ ಶುಲ್ಕವನ್ನು ತೆತ್ತು ಸಭೆಯಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದು
ಸಂಘಟನೆ ತಿಳಿಸಿದೆ.










|