|
ಬ್ಯಾರಿ ಭಾಷೆಯ ಮೇಲೆ ಜಾಗತೀಕರಣದ
ಪ್ರಭಾವ

18.06.10
ಮಂಗಳೂರು : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ಅತ್ತಾವರದಲ್ಲಿರುವ ತನ್ನ ಕಛೇರಿಯಲ್ಲಿ ಬ್ಯಾರಿ
ಭಾಷೆಯ ಮೇಲೆ ಜಾಗತೀಕರಣದ ಪ್ರಭಾವ ಎಂಬ ವಿಷಯದ ಚರ್ಚಾಕೂಟವನ್ನು ಇಂದು ಸಂಜೆ ಏರ್ಪಡಿಸಿತ್ತು.
ಬಿ. ಚಂದ್ರಹಾಸ ರೈ ರಿಜಿಸ್ಟಾರ್ ಕರ್ನಾಟಕ ಬ್ಯಾರಿ ಸಾಹಿತ್ಯ
ಅಕಾಡೆಮಿ ಇವರು ಚರ್ಚಾಕೂಟವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಜಾಗತೀಕರಣ
ಪ್ರಾರಂಭವಾದುದು ಮುಖ್ಯವಾಗಿ ಉಡುಗೆ-ತೊಡುಗೆ, ಆಚಾರ-ವಿಚಾರ ಮತ್ತು ವ್ಯವಹಾರಗಳಿಂದ. ನೀರಿನ ಸಮಸ್ಯೆ
ಇಲ್ಲದವನಿಗೆ ನೀರಿನ ಬೆಲೆ ಗೊತ್ತಾಗುವುದಿಲ್ಲ. ಯುನೆಸ್ಕೊ ವರದಿ ಪ್ರಕಾರ 50,100 ವರ್ಷಗಳಲ್ಲಿ
ಕನ್ನಡ ಭಾಷೆ ಇಲ್ಲವಾಗುತ್ತದೆ. ಯಾವುದೇ ಭಾಷೆ, ಕಲೆ, ಸಂಸ್ಕೃತಿಯನ್ನು ರಕ್ಷಿಸುವುದು ನಮ್ಮೆಲ್ಲರ
ಕರ್ತವ್ಯವಾದಾಗ ಅದು ಉಳಿಯಬಹುದು. ಈ ನಿಟ್ಟಿನಲ್ಲಿ ಅಕಾಡೆಮಿ ಪ್ರಯತ್ನಿಸಬೇಕು ಎಂದು ರೈ ಹೇಳಿದರು.

ಜಾಗತೀಕರಣದ ವಿಷಯ ಮಂಡನೆ ಮಾಡಿದ ಯುವ ಲೇಖಕ ಇಸ್ಮತ್ ಪಜೀರು
ಮಾತನಾಡಿ ಜಾಗತೀಕರಣವು ಹೊರಗೆ ಎಷ್ಟು ಚೆನ್ನಾಗಿರುತ್ತದೊ ಒಳಗೆ ಅಷ್ಟೇ ಕೆಡುಕನ್ನು ಮಾಡುತ್ತದೆ.
ಜಾಗತೀಕರಣದಲ್ಲಿ ಬಂಡವಾಳ ಶಾಹಿಗಳ ದೌರ್ಜನ್ಯ ಎದ್ದು ಕಾಣುತ್ತದೆ. ಇಲ್ಲಿ ಉಳ್ಳವರಿಗೆ ಮಾತ್ರ
ಅವಕಾಶ. ಶ್ರೀಮಂತರು ಮಾತ್ರ ಬದುಕಲು ಸಾದ್ಯ. ಶ್ರೀಮಂತರ ಆಸ್ತಿ ಹೆಚ್ಚಾದಂತೆ ಬಡವರು
ನಿರ್ಗತಿಕರಾಗುತ್ತಾ ಹೊಗುತ್ತಾರೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರ ಪಾಲಿಕೆ ಸದಸ್ಯರಾದ ಅಝೀಝ್
ಬೈಕಂಪಾಡಿ ವಹಿಸಿದ್ದರು. ಬ್ಯಾರಿ ಸಂಪ್ರದಾಯದಂತೆ ಪನ್ನೀರು, ಖರ್ಜೂರ, ಕಲ್ಲುಸಕ್ಕರೆಗಳನ್ನು
ಅತಿಥಿಗಳಿಗೆ ನೀಡಿ ಸ್ವಾಗತಿಸಲಾಯಿತು. ಅಕಾಡೆಮಿ ಸದಸ್ಯ ಹಂಝಮಲಾರ್ ಕಾರ್ಯಕ್ರಮ ನಿರೂಪಿಸಿದರು.
|