|
ರಾವಣದಹನದೊಂದಿಗೆ ಮೂರು ದಿನಗಳ
ರಾಮೋತ್ಸವಕ್ಕೆ ತರೆ

26.03.10 : ಮಾರ್ಚ್ 23ರಿಂದ ಮಂಗಳೂರು ನೆಹರೂ
ಮೈದಾನಿನಲ್ಲಿ ನಡೆದ ಶ್ರೀ ರಾಮೋತ್ಸವ ಮಾರ್ಚ್ 25 ರಂದು ರಾವಣನ ದಹನದೊಂದಿಗೆ ಮುಕ್ತಾಯಗೊಂಡಿತು.
ಬೆಳಿಗ್ಗಿನಿಂದ ಭಜರಂಗದಳದ ಕಾರ್ಯಕರ್ತರಿಗೆ ಕಬ್ಬಡ್ಡಿ ಪಂದ್ಯಾಟ,
ಮಧ್ಯಾಹ್ನ
ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಸಂಜೆ ಶ್ರೀ ಕ್ಷೇತ್ರ ವಜ್ರದೇಹಿ ಶ್ರೀ ರಾಜಶೇಖರಾನಂದ
ಸ್ವಾಮೀಜಿಗಳ ಆಶೀರ್ವಚನದೊಂದಿಗೆ ಧಾರ್ಮಿಕ ಸಭೆ ನಡೆಯಿತು. ರಾತ್ರಿ 9.30ಕ್ಕೆ ಮಹಾಪೂಜೆಯ
ನಂತರ ಹತ್ತು ತಲೆಯ ರಾವಣನ ದಹನ ಕಾರ್ಯಕ್ರಮ ನಡೆಯಿತು.










|