|
ಮಂಗಳೂರಿನಲ್ಲಿ ಕೃಷಿ ಮೇಳ ಉದ್ಘಾಟನೆ

ಮಂಗಳೂರು 26.10.09 : ಕೃಷಿ ವಿಜ್ಞಾನ ಕೇಂದ್ರ ಮಂಗಳೂರು ನಡೆಸುತ್ತಿರುವ ಕೃಷಿ ಮೇಳವನ್ನು ದಕ್ಷಿಣ
ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀ.ಕೆ. ಸಂತೋಷ್ ಕುಮಾರ್ ಭಂಡಾರಿ ಉದ್ಘಾಟಸಿದರು.
ಕೃಷಿ
ವಿಶ್ವವಿದ್ಯಾನಿಯ ಬೆಂಗಳೂರು ಇದರ ಸಹಯೋಗದೊಂದಿಗೆ ವಲಯ ಕೃಷಿ ಸಂಶೋಧನಾ ಕೇಂದ್ರ ಬ್ರಹ್ಮಾವರ,
ತೋಟಗಾರಿಕಾ ಸಂಶೋಧನಾ ಕೇಂದ್ರ ಉಳ್ಳಾಲ, ವಿಸ್ತರಣಾ ಶಿಕ್ಷಣ ಘಟಕ, ಮೀನುಗಾರಿಕಾ ಕಾಲೇಜು ಮಂಗಳೂರು,
ಕೃಷಿ, ತೋಟಗಾರಿಕೆ, ಜಲಾನಯನ ಅಭಿವೃದ್ಧಿ, ಪಶುಸಂಗೋಪನೆ, ಮೀನುಗಾರಿಕೆ, ರೇಷ್ಮೆ, ಮಹಿಳಾ ಮತ್ತು
ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಪಂಚಾಯತ್ ಮಂಗಳೂರು ಮತ್ತು ದ.ಕ ಜಿಲ್ಲಾ ಕೃಷಿಕ ಸಮಾಜ ಮಂಗಳೂರು
ಇದರ ಸಹಭಾಗಿತ್ವದಲ್ಲಿ ಕೃಷಿ ಮೇಳ ಉದ್ಘಾಟನೆಗೊಂಡಿತು.
ಜಾಗತೀಕರಣ ಪ್ರಭಾವದಿಂದ ಯುವ ಜನತೆ ಕೃಷಿ ಚಟುವಟಿಕೆಗಳಿಂದ ದೂರ ಸರಿಯುತ್ತಿದೆ. ಹಿಂದಿನ
ಕಾಲದಲ್ಲಿದ್ದಷ್ಟು ಪ್ರಧಾನ್ಯತೆ ಈಗ ಕೃಷಿಗೆ ಸಿಗುತ್ತಿಲ್ಲ. ಎಂದು ಉದ್ಘಾಟನೆ ಮಾಡಿದ ಕೆ. ಸಂತೋಷ್
ಕುಮಾರ್ ಭಂಡಾರಿ ಹೇಳಿದರು. ಪ್ರಕೃತಿ ವಿಕೋಪ, ಕೃಷಿಯಿಂದ ಬರುವ ಕನಿಷ್ಠ ಆದಾಯಗಳು ಕೃಷಿಕರನ್ನು
ಹತಾಶೆ ಮಾಡುತ್ತಿದೆ ಎಂದರು. ಕೃಷಿಗಾಗಿ ನಮ್ಮ ಕೃಷಿಕರು ಶ್ರಮ ಪಡದಿದ್ದರೆ ಮುಂದೆ ನಮ್ಮ ದೇಶ
ಸಂಕಷ್ಟಕ್ಕೆ ಸಿಲುಕಲಿದೆ. ಸರಕಾರ ಕೃಷಿಕರಿಗಾಗಿ ಹಲವಾರು ಸವಲತ್ತುಗಳನ್ನು ನೀಡುತ್ತಿದೆ. ಸಾಲ
ಮನ್ನ, ಉಚಿತ ವಿದ್ಯುತ್, ಕಡಿಮೆ ಬಡ್ಡಿಯಲ್ಲಿ ಸಾಲ ನೀಡುತ್ತಿದೆ ಎಂದರು. ಕಾರ್ಯಕ್ರಮದಲ್ಲಿ
ಅದ್ಯಕ್ಷತೆಯನ್ನು ಡಾ.ಎಂ.ಹನುಮಂತಪ್ಪ ಸಹ ನಿದರ್ೆಶಕರು ವಲಯ ಕೃಷಿ ಸಂಶೋಧನಾ ಸಂಸ್ಥೆ ಬ್ರಹ್ಮಾವರ
ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಸದಾನಂದ ಮಲ್ಲಿ ಅಧ್ಯಕ್ಷರು, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ
ಸಮಿತಿ ದ.ಕ ಜಿಲ್ಲಾ ಪಂಚಾಯತ್, ಮಂಗಳೂರು. ಶ್ರೀ ಎಸ್.ಡಿ. ಸಂಪತ್ ಸಾಮ್ರಾಜ್ಯ ಅಧ್ಯಕ್ಷರು, ಜಿಲ್ಲಾ
ಕೃಷಿಕ ಸಮಾಜ, ಮಂಗಳೂರು, ಶ್ರೀ ಪೆಲಪ್ಪಾರ್ ವೆಂಕಟ್ರಮಣ ಭಟ್ ಅಧ್ಯಕ್ಷರು ದಕ್ಷಿಣ ಕನ್ನಡ ಕೃಷಿ
ಅಭಿವೃದ್ಧಿ ಸಹಕಾರ ಸಂಘ ಮಂಗಳೂರು, ಶ್ರೀ ವಿಜಯಕುಮಾರ್ ನಾಗನಾಳ ಕೃಷಿ ಅಧಿಕಾರಿಗಳು
ಶ್ರೀ.ಕ್ಷೇ.ಧ.ಗ್ರಾ.ಯೋ.ಬೆಳ್ತಂಗಡಿ, ಶ್ರೀ ಪಾಥಸಾರಥಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು, ವಿಜಯ
ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ, ಮಂಗಳೂರು, ಬಾಗವಹಿಸಿದ್ದರು. ಸ್ವಾಗತ ಭಾಷಣವನ್ನು ಡಾ.ಎಚ್.
ಹನುಮಂತಪ್ಪ ಕೃಷಿ ವಿಜ್ಞಾನ ಕೇಂದ್ರ ಮಂಗಳೂರು ಇವರು ನಿರ್ವಹಿಸಿದರು. ಕಾರ್ಯಕ್ರಮ ನಿರೂಪಣೆಯನ್ನು
ಡಾ. ನಾಗೇಶ್, ಜಿ. ವಿಷಯ ತಜ್ಞರು, ಕೃಷಿ ವಿಜ್ಞಾನ ಕೇಂದ್ರ ಮಂಗಳೂರು ಇವರು ನಿರ್ವಹಿಸಿದರು.
ವಂದನಾರ್ಪಣೆಯನ್ನು ಡಾ.ಪರಶುರಾಮ ಚಂದ್ರವಂಶಿ, ವಿಷಯ ತಜ್ಞ ಮಣ್ಣು ವಿಜ್ಞಾನ ವಿಭಾಗ ಇವರು
ನೆರವೇರಿಸಿದರು.
ಕೃಷಿ
ವಸ್ತು ಪ್ರದರ್ಶನ ಮಳಿಗೆಯನ್ನು ಶ್ರೀ.ಎಸ್.ಡಿ ಸಂಪತ್ ಸಾಮ್ರಾಜ್ಯ ಇವರು ಶುಭಾರಂಭಗೊಳಿಸಿದರು.
ಕೃಷಿ ಮೇಳ ಮತ್ತು ಕೃಷಿ ವಸ್ತು
ಪ್ರದರ್ಶನದ ಇನ್ನಷ್ಟು ಫೋಟೋಗಳು
ಇನ್ನಷ್ಟು ಸುದ್ದಿಗಳು
ಹಿಂದಿನ ಸುದ್ದಿಗಳು
|